ಇತಿಹಾಸ

ಇತಿಹಾಸದ ಪ್ರಕಾರ ಇಲ್ಲಿ ವಿವರಿಸಿರುವ ಎಲ್ಲ ಘಟನೆಗಳು ೭೦೦ ರಿಂದ ೮೦೦ ವರ್ಷಗಳ ಹಿದೆ ಸಂಭವಿಸಿದೆ.

ವೀರಕ್ಯಾತರಾಯ ಹಾಗು ವೀರ್ನಗಮ್ಮನಿಗೆ ಸಂಬಂದಿಸಿದ ಘಟನೆಗಳು.
           ಉಲ್ಲೇಖ: ಮಹಾಸತಿ ಶಿವಶರಣೆ ಶ್ರೀ ವೀರನಾಗಮ್ಮ ದೇವಿ, ಲೇಖಕ: ಡಾ।। ರಾಜಣ್ಣ ಹುಣಿಸೆಪಾಳ್ಯ, ಎಮ್ಮ. ಎ, ಎಮ್ಮ. ಎಡ್, ಎಮ್ಮ. ಫಿಲ್, ಪಿ. ಎಚ್. ಡಿ

ಶ್ರೀ ವೀರಕ್ಯತರಾಯರ ಜನನ ವಾರಂಗಲ್ ನಗರದಲ್ಲಾಯಿತು. ಇವರ ತಂದೆ ತಾಯಿ ಶಿವನ ಮಹಾ ಭಕ್ತರು. ತಂದೆಯ ಹೆಸರು ಶ್ರೀ ಬೈಚಪ್ಪ ಮತ್ತು ತಾಯಿ ಶ್ರೀಮತಿ ಪದುಮಲದೇವಿ. ವೀರಕ್ಯತರಾಯನಿಗೆ ಇಬ್ಬರು ತಮ್ಮಂದಿರು ಹುಲಿಪೆಮ್ಮಿಗರಾಯ ಮತ್ತು ಉದ್ದಿಗರಾಯ. ವೀರಕ್ಯಾತರಾಯ ಮಲ್ಲದೇವಿ ಎಂಬುವರನ್ನು ವಿವಹಿಸಿದ್ದರು, ಇವರಿಗೆ ವೀರನಾಗಪ್ಪ ಎಂಬ ಪುತ್ರನಿದ್ದ. ವೀರನಾಗಪ್ಪ ವೀರನಗಮ್ಮ ಎಂಬುವರನ್ನು ವಿವಾಹವಾಗಿದ್ದರು. ವೀರಕ್ಯತರಾಯರ ಜನನವಗಿದ್ದೆ ನೆಲಮಂಗಲದ ಕುಂಚಗರಬೈಚನ ದುಷ್ಕೃತ್ಯವನ್ನು ಸಮಪ್ತಿಗೊಳಿಸಲಿಕ್ಕೆ.

ಇತಿಹಾಸ ತಗ್ನ್ಯರ ಪ್ರಕಾರ ಸುಮಾರು ೭೦೦ ವರ್ಷಗಳ ಹಿಂದೆ ಬೆಂಗಳೂರು ಗ್ರಾಮೀಣ ಭಾಗದ ನೆಲಮಂಗಲದಲ್ಲಿ ಪಾಳ್ಯೆಗಾರನೊಬ್ಬ ಇದ್ದ, ಅವನ ಹೆಸರು ನೀಲಾವತಿ ಕುಂಚಗಾರಬೈಚ. ಈತ ಸುತ್ತಮುತ್ತಲಿನ ಎಲ್ಲ ಪಾಳ್ಯೆಗಾರರನ್ನು ಸೋಲಿಸಿದ್ದ, ಹಾಗು ಸುತ್ತಮುತ್ತಲಿನ ೫೬ ಪ್ರಾಂತ್ಯದಲ್ಲಿ ತನ್ನನ್ನು ಸೋಲಿಸುವ ವ್ಯಕ್ತಿಯು ಇಲ್ಲವೆಇಲ್ಲ ಎಂದು ಘೋಶಿಸಿದ್ದ. ಹತ್ತಿರದ ಗ್ರಮಸ್ತರನ್ನು ಹಿಂಸಿಸಿ ಸೆರೆಹಿಡಿದಿದ್ದ, ವಿರೋದಿಸಿದವರ ನಾಲಿಗೆಯನ್ನು ಕತ್ತರಿಸಿ ತನ್ನ ಚಪ್ಪಲಿಯನ್ನಗಿಸಿಕೊಳ್ಳುತಿದ್ದ.

ಪೆನಗೊಂಡದ ರಾಜ ಜಗದೇವರಾಯ, ಕುಂಚಗಾರಬೈಚನ ಮೇಲೆ ದಂಡೆತ್ತಿ ಹೋಗಿದ್ದ ಆದರೆ ಯುದ್ದದಲ್ಲಿ ಸೋತಿದ್ದ. ಹಿಂದಿರುಗಿ, ತನ್ನ ಆಸ್ಥಾನದ ದೈವಜ್ಞ್ಯರಲ್ಲಿ ಈ ಸೋಲಿನ ಕಾರಣವನ್ನು ಕೇಳಿದ. ಇದರ ಕಾರಣ ಕುಂಚಗಾರಬೈಚ ತಾಯಿ ಶಕ್ತಿಯ ಮಹಾ ಭಕ್ತ, ಮತ್ತು ಈತನನ್ನು ಸೋಲಿಸುವ ವ್ಯಕ್ತಿ ತನ್ನ ತಾಯಿಯ ಬಸುರಿನಲ್ಲಿ ೧೨ ವರ್ಷಗಳ ಕಾಲ ಇರಬೆಕಿತ್ತು. ಈ ಕಾರಣಕ್ಕಾಗಿಯೇ ಜಗದೇವರಾಯ ಯುದ್ಧದಲ್ಲಿ ಸೋತಿದ್ದು.

ಈ ಎಲ್ಲ ಕ್ರೂರ ಘಟನೆಗಳನ್ನು ತನ್ನ ಯೋಗ ದೃಷ್ಟಿಯಿಂದ ನೋಡುತಿದ್ದ ಪರಮೇಶ್ವರ, ಈ ಕೃತ್ಯಗಳಿಗೆ ಅಂತ್ಯಹಾಡಲು ನಿರ್ಧರಿಸಿದ. ಬೈಚಪ್ಪನ ಸತ್ಯ, ನಿಷ್ಠೆ, ಭಕ್ತಿಯನ್ನು ಮೆಚ್ಚಿದ ಪರಮೇಶ್ವರ ಅನುಗ್ರಹಿಸಲು ನಿರ್ಧರಿಸಿದ. ಬೈಚಪ್ಪ ಪದುಮಲದೇವಿಯನ್ನು ವಿವಾಹವಾಗಿದ್ದ, ಆಕೆ ಉಂಡೆತ್ತರಾಯನ ಮಗಳು. ಒಂದುದಿನ ಪದುಮಲದೇವಿ ವಾರಂಗಲ್ಲುನಗರದಲ್ಲಿ ಹಾಲು, ಮೊಸರನ್ನು ಮಾರಿ ಮನೆಗೆ ಹಿಂತಿರುಗುವ ವೇಳೆ, ಪರಮೇಶ್ವರನು ಪ್ರತ್ಯೆಕ್ಷನಾಗಿ ವರ ಒಂದನ್ನು ಅನುಗ್ರಹಿಸಿದ, "ನಿನಗೆ ಒಬ್ಬ ವೀರ ಪುತ್ರ ಜನಿಸುವನೆಂದು".

ವಾರಂಗಲ್ಲು ನಗರವನ್ನು ಪ್ರತಾಪರಾಯ ಎಂಬ ರಾಜ ಆಳುತಿದ್ದ. ಈತನಿಗೆ ಮತ್ತು ನಾಗರೀಕರಿಗೆ ಮಕ್ಕಳ ಭಾಗ್ಯ ಇರಲಿಲ್ಲ. ಆಸ್ಥಾನದ ಸಿದ್ದಾಂತಿಗಳನ್ನು ಕರೆಸಿ ಇದಕ್ಕೆ ಪರಿಹಾರ ಸೂಚಿಸುವಂತೆ ಕೇಳಿದ, ಅದಕ್ಕೆ ಅವರು ಜೇನು ಕುಂಬಳಕಾಯಿಯನ್ನು ಬಿತ್ತಿ ಆ ಬಳ್ಳಿಯಿಂದ ಬಿಡುವ ಫಲವನ್ನು ಭಕ್ಷಿಸುವಂತೆ ಸೂಚಿಸಿದರು. ರಾಜ ಸಿದ್ದಾಂತಿಗಳ ಮಾತಿನಂತೆ ನಡೆದುಕೊಂಡ. ರಾಜ ಮತ್ತು ಮಕ್ಕಳಿಲ್ಲದ ಪ್ರಜೆಗಳು ಜೇನು ಕುಂಬಳಕಾಯಿಯ ಬೀಜವನ್ನು ಬಿತ್ತಿದರು.

ಜೇನು ಕುಂಬಳ ಬಳ್ಳಿಯು ಚನ್ನಾಗಿಯೇ ಬೆಳೆದರು ಫಲವನ್ನು ಮಾತ್ರ ನೀಡಲಿಲ್ಲ. ಆದರೆ ಪದುಮಲದೇವಿಯು ಬಿತ್ತಿದ ಬಳ್ಳಿ ಮಾತ್ರ ಫಲ ನೀಡಿತು. ಇದನ್ನು ಕೇಳಿದ ಪ್ರತಾಪರಾಯ ಅಚ್ಚರಿಗೊಂಡ. ತನ್ನ ಸೈನಿಕರನ್ನು ಹಣ್ಣನ್ನು ಕಿತ್ತುತರುವಂತೆ ಸೂಚಿಸಿದ. ಪದುಮವ್ವ ಪರಮೇಶ್ವರನನ್ನು ನೆನೆದು ಹಣ್ಣನ್ನು ಕಿತ್ತು ಅದರಿಂದ ಪಚಡಿಯನ್ನು ಮದಿದಲು. ಇದನ್ನು ಎಲ್ಲರಿಗು ಹಂಚಲಾಯಿತು. ಈ ಮೂಲಕ ಎಲ್ಲರಿಗು ಮಕ್ಕಳಾಯಿತು. ಎಲ್ಲರು ಪದುಮವ್ವಳ ನಿಷ್ಠೆ, ಭಕ್ತಿಯನ್ನು ಹೊಗಳಿದರು. ಪರಮೇಶ್ವರ ಮತ್ತೊಮ್ಮೆ ಪ್ರತ್ಯಕ್ಷನಾಗಿ ಪದುಮವ್ವ ಇನ್ನು ೧೨ ವರ್ಷಗಳ ಕಾಲ ತನ್ನ ಮಗನನ್ನು ಗರ್ಭದಲ್ಲಿ ಧರಿಸಬೀಕೆಂದು ಅದೃಶ್ಯನಾದ.

ಪದುಮವ್ವ ಕೂಡ ಕುಂಬಳ ಹಣ್ಣನ್ನು ತಿಂದಳು. ಪದುಮವ್ವ ಗರ್ಭವತಿಯಾಗಿ ೧೨ ವರ್ಷ ಕಳೆದರು ಮಗುವಿನ ಜನನ ಅಗಲಿಲ್ಲ. ಇದನ್ನು ಕೇಳಿ ಅಚ್ಚರಿಗೊಂಡ ಪ್ರತಾಪರಾಯ ಜ್ಯೋಯಿಸರನ್ನು ಕರೆಸಿ ಇದು ಏನನ್ನು ಸೂಚಿಸುತ್ತದೆ ಎಂದು ಕೇಳಿದ. ಜ್ಯೋಯಿಸ ಈ ರೀತಿ ಹೇಳಿದ "ರಾಜ, ಪದುಮವ್ವಳ ಗರ್ಭದಲ್ಲಿ ವೀರ ಹಾಗು ಶಕ್ತಿಶಾಲಿ ಮಗನ ಜನನವಾಗುವುದು, ಆತ ನಿನ್ನ ವೈರಿಯಾಗಿ ಇಡಿ ರಾಜ್ಯವನ್ನೇ ಆಳಬಲ್ಲನು".

ರಾಜ ಚಿಂತಾಕ್ರಾಂತನಾಗಿ ತನ್ನ ಮಂತ್ರಿಗಳನ್ನು ಕರೆಸಿದ. ತದನಂತರ ಸೂಲಗಿತ್ತಿಯರನ್ನು ಕರೆಸಿ, ಪದುಮವ್ವಳು ಮಗುವಿಗೆ ಜನನ ನೀದುತ್ತಿದಂತೆ ಅದನ್ನು ಕೊಲ್ಲಬೀಕೆಂದು ಸೂಚಿಸಿದ. ಇದಕ್ಕೆ ಸೂಲಗಿತ್ತಿಯರು ಕಬ್ಬಿಣದ ಉಗುರನ್ನು ಸಿದ್ದಪಡಿಸುವಂತೆ ಕೇಳಿದರು.

ಎಲ್ಲ ವಿದ್ಯಮಾನವನ್ನು ಪರಮೇಶ್ವರ ತನ್ನ ಯೋಗ ದೃಷ್ಟಿಯಿಂದ ನೋಡಿ, ಪದುಮವ್ವಳಿಗೆ ಮುಂಬರುವ ಅಪಾಯದ ಬಗ್ಗೆ ಸೂಚಿಸಿದ. ಹಾಗೆ, ಮಗುವು ಮುಂದಿನಿಂದ ಜನಿಸದೆ ಬೆನ್ನಿನಿಂದ ಜನಿಸುವುದಾಗಿ ಹೇಳಿದ. ಇದೆ ರೀತಿ ಕೈಯಲ್ಲಿ ಕತ್ತಿಯನ್ನು ಹಿಡಿದ ವೀರ ಪುತ್ರನ ಜನನವಾಯಿತು. ಜನಿಸಿದ ಕೂಡಲೇ ಸೋಲಗಿತ್ತಿಯರ ಕಿವಿ ಮೂಗನ್ನು ಹರಿದುಹಾಕಿದ. ಮಗುವಿಗೆ ವೀರಕ್ಯಾತರಾಯನೆಂದು ನಾಮಕರಣ ಮಾಡಲಾಯಿತು. ಕೆಲವು ವರ್ಷಗಳ ನಂತರ ಪದುಮಲದೇವಿಯು ಮತ್ತೆ ಎರಡು ಗಂಡು ಮಗುವಿಗೆ ಜನನವಿತ್ತಳು, ಅವರಿಗೆ ಹುಲಿಪೆಮ್ಮಿಗರಾಯ ಮತ್ತು ಉದ್ದಿಗರಾಯ ಎಂದು ನಾಮಕರಣ ಮಾಡಲಾಯಿತು. ವೀರಕ್ಯಾತರಾಯ ೬೪ ವಿದ್ಯೆಗಳಲ್ಲಿಯು ನೈಪುಣ್ಯವನ್ನು ಪಡೆದ. ಪ್ರತಾಪರಾಯ ಅಪಘಾತ ಒಂದರಲ್ಲಿ ಸತ್ತ. ಪ್ರಜೆಗಳು ವೀರಕ್ಯಾತರಾಯನನ್ನು ತಮ್ಮ ರಾಜನನ್ನಾಗಿ ಮಾಡಿದರು. ವೀರಕ್ಯಾತರಾಯ ಮಲ್ಲದೆವಿಯನ್ನು ಮದುವೆಯಾದ. ವೀರಕ್ಯಾತರಯನು ರಾಜ್ಯವನ್ನು ಸತ್ಯ ಮತ್ತು ನ್ಯಾಯಯುತವಾಗಿ ಆಳಿದ. ಹಲವಾರು ಮುಸಲ್ಮಾನ ದಾಳಿಕೋರರನ್ನು ಸೋಲಿಸಿದ. ಈ ರಕ್ತಪಾತದಿಂದ ವೀರಕ್ಯತರಯನು ನೊಂದು ರಾಜ್ಯವನ್ನು ತ್ಯಜಿಸಲು ನಿರ್ಧರಿಸಿದ.

ನಂತರ ದಕ್ಷಿಣದ ಕಡೆಗೆ ಹೊರತ. ದಾರಿಯಲ್ಲಿ ದ್ವಾರಕೆಯಿಂದ ಬಂದ ಕುಂಚಿಟಿಗರ ೪೮ ಗುಂಪನ್ನು ಭೇಟಿಯಾದ. ಅವರೆಲ್ಲರೂ ಆನೆಗೊಂದಿ ಇಂದ ಕಧರಿಯನ್ನು ತಲುಪಿದರು. ದಾರಿಯುದ್ದಕ್ಕೂ ಹಲವರು ಕೋಟೆ ಮತ್ತು ಹಳ್ಳಿಗಳನ್ನು ನಿರ್ಮಿಸಿದರು. ಕಡೆಗೆ ಪೆಮ್ಮಿಗದೆವರಹಳ್ಳಿಯಲ್ಲಿ ನೆಲೆಸಿದರು, ಇಲ್ಲಿ ಕೋಟೆಯನ್ನು ಕಟ್ಟಿ ಜಾನುವಾರು ಸಾಕುವುದನ್ನು ಮುಖ್ಯ ಕೆಲಸವನ್ನಗಿಸಿಕೊಂಡ.

ದನಗಳು ಒಂದು ಪೊದೆಯ ಬಳಿ ಹುಲ್ಲು ಮೇಯುವುದಕ್ಕಗಿ ಹೋಗುತಿದ್ದವು. ಹಸು ಒಂದು ಪೊದೆಯ ಒಳಗೆ ಹೋಗಿ ಹಾಲು ಇಲ್ಲದೆ ಹೊರಬರುತ್ತಿತ್ತು. ಇದನ್ನು ಗಮನಿಸಿದ ಗೊಲ್ಲ ಪೊದೆಯನ್ನು ಕಿತ್ತುಹಾಕಿದ, ಅಲ್ಲಿ ಹುತ್ತ ಒಂದನ್ನು ಕಂಡ. ಅದನ್ನು ಧ್ವಂಸ ಮಾಡಲಾರಮ್ಬಿಸಿದರು. ಇದನ್ನು ಕಂಡ ವೀರಕ್ಯಾತರಾಯ ಹುತ್ತದಿಂದ ರಕ್ತ ಸುರಿಯುವುದನ್ನು ಗಮನಿಸಿದ. ವೀರಕ್ಯಾತರಾಯ ಕ್ಷಮೆಯಾಚಿಸಲಾರಮ್ಬಿಸಿದ, ಹಾಗೆ ತಾವು ಯಾರೆಂದು ಕೇಳಿದ.

ಇದನ್ನು ಗಮನಿಸಿ ತಾನು ರಾಮೇಶ ಎಂದು ವೀರಕ್ಯತರಾಯನಿಗೆ ಹೇಳಿದ. ಇದನ್ನು ಕೀಲಿ ವೀರಕ್ಯಾತರಾಯ ಆತನಿಗೆ ದೇವಾಲಯವನ್ನು ನಿರ್ಮಿಸಿದ, ಹಾಗೆ ದೇವಸ್ಥಾನದ ಬೆಳವಣಿಗೆಗಾಗಿ ೨ ಹಳ್ಳಿಯನ್ನು ದಾನಮಾಡಿ, ತನ್ನ ದಕ್ಷಿಣದ ಕಡೆಯ ಪಯಣವನ್ನು ಮುಂದುವರಿಸಿದ.

ಆ ಕಾಲದಲ್ಲಿ ತುಂಬಾಡಿಯಲ್ಲಿ ಮಲ್ಲನಾಯಕ ಎಂಬ ದೂರ್ಥ ಸಮಂತನಿದ್ದ. ಆತ ಪೆನಗೊಂಡದ ರಾಜನ ಕೆಳಗಿದ್ದ. ವೀರಕ್ಯಾತರಾಯನ ವಿರುದ್ದ ರಾಜನಿಗೆ ಇಲ್ಲಸಲ್ಲದ ದೂರನ್ನು ಹೇಳುತಿದ್ದ. ಮಲ್ಲನಾಯಕನ ಮಗಳು ನಂದೀಶ್ವರನ ಅಪರವತರನಾದ ವೀರಕ್ಯಾತರಾಯನನ್ನು ಮೂಹಿಸುತಿದ್ದಳು. ಮಲ್ಲನಾಯಕ ವೀರಕ್ಯತರಯನನ್ನು ತನ್ನ ಮಗಳನ್ನು ಮದುವೆಯಾಗು ಎಂದು ಬಲವಂತ ಮಾಡುತಿದ್ದ. ಇದಕ್ಕೆ ವೀರಕ್ಯಾತರಾಯ ಮಾಂಸಹಾರಿ ಆದ ನಿನ್ನಂತವನ ಜೊತೆ ಎಂದು ಸಂಭದ ಬೆಳೆಸುವುದಿಲ್ಲ ಎಂದು ಪ್ರತಿಕ್ರಯಿಸಿದ. ಮಲ್ಲನಾಯಕನ ದೂರುಗಳನ್ನು ಕೇಳುತಿದ್ದ ಪೆನಗೊಂಡದ ದೊರೆ ವೀರಕ್ಯತರಾಯನಿಗೆ ಪ್ರತಿದಿನವೂ ತನಗೆ ಹುಲಿಯ ಹಾಲನ್ನು ತರಬೇಕೆಂದು ಅಪ್ಪಣೆಕೊಟ್ಟ, ತಪ್ಪಿದಲ್ಲಿ ಮೃತ್ಯು ದಂಡ ಕೊಡುವುದಾಗಿ ಎಚರಿಸಿದ. ವೀರಕ್ಯಾತರಾಯ ಅಪ್ಪಣೆಯಂತೆ ಪ್ರತಿನಿತ್ಯ ಹುಲಿಯ ಹಾಲನ್ನು ತಂದು ಕೊಡುತಿದ್ದ. ಮಲ್ಲನಾಯಕ, ವೀರಕ್ಯಾತರಾಯನು ಕೊಡುತ್ತಿರುವುದು ಹಸುವಿನ ಹಾಳೆ ಹೊರೆತು ಹುಲಿಯ ಹಾಲಲ್ಲ ಎಂದು ಚಾಡಿ ಹೆಲಿದ. ತಾನು ಸತ್ಯವಂತ ಎಂದು ದೃಡಪದಿಸಲಿಕ್ಕೆ ಹುಲಿಯ ಗುಂಪನ್ನು ಪೆನಗೊಂಡದ ರಾಜಧಾನಿಗೆ ಕರೆತಂದ, ಜೋಳದ ಬೀಜವನ್ನು ಬಿತ್ತಿ ಅದನ್ನು ಏಳೇ ದಿನದಲ್ಲಿ ಬೆಳೆದ. ಬೆಳೆಯನ್ನು ಧ್ವಂಸ ಮಾಡಲು ಬಂಡ ತುಂಬಾಡಿಯಾ ಜನ ಕಣ್ಣುಗಳನ್ನು ಕಳೆದುಕೊಂಡು, ವೀರಕ್ಯಾತರಾಯನ ಬಳಿಗೆ ಬಂದು ಬೀಡುವರು. ವೀರಕ್ಯಾತರಾಯನು ಅವರ ದೃಷ್ಟಿಯನ್ನು ಹಿಂದಿರುಗಿಸುವನು.

ಪೆನಗೊಂಡದ ರಾಜ ತಾನು ಮಲ್ಲನಾಯಕನ ದೂರನ್ನು ಕೇಳಿ ತಪ್ಪುಮಡಿದೆ ಎಂದು ಅರಿತು ವೀರಕ್ಯತರಾಯನಿಗೆ ಏನಾದರು ಕೇಳಿಕೋ ಎಂದ. ಇದನ್ನು ಸ್ವೀಕರಿಸಿದ ವೀರಕ್ಯಾತರಾಯ ಕಣ್ಣಿ ಒಂದನ್ನು ಎಸೆದ, ಅದು ಎಲ್ಲಿಯವರೆಗೂ ಹೋಗಿ ಬೀಳುವುದೋ ಅಷ್ಟು ಭೂಮಿಯನ್ನು ಕೇಳಿದ. ಆ ಜಾಗದಲ್ಲಿ ತಾಡಿ ಎಂಬ ಗ್ರಾಮವನ್ನು ನಿರ್ಮಿಸಿದ. ಈಗಲೂ ತಾಡಿಯಲ್ಲಿ ಯುಗಾದಿಯಂದು ವೀರಕ್ಯಾತರಾಯನ ಸೊಸೆ ನಾಗಮ್ಮನ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ.

ವೀರಕ್ಯಾತರಾಯ ತನ್ನ ಪಯಣವನ್ನು ಮುಂದುವರೆಸಿ ವಡ್ಡಗೆರೆ ತಲುಪಿದ, ಇಲ್ಲಿ ಹಲವು ಕೂತೆಗಳನ್ನು ಕಟ್ಟಿ ದಾನಧರ್ಮ ಮಡಿದ. ಆದರೆ ಮಲ್ಲನಾಯಕ ವೀರಕ್ಯಾತರಾಯನ ವಿರುದ್ದದ ಕೃತ್ಯಗಳನ್ನು ನಿಲ್ಲಿಸಲಿಲ್ಲ. ವೀರಕ್ಯತರಾಯನನ್ನು ಸಾಯಿಸಲು ಪ್ರಯತ್ನಿಸಿ ವಿಪಳಗೊಂಡ. ಮಲ್ಲನಾಯಕ ವೀರಕ್ಯತರಾಯಣ ಕೈಯಿಂದಲೇ ಸತ್ತ. ತುಂಬಾಡಿ ಕೂಡ ವೀರಕ್ಯಾತರಾಯನ ಆಡಳಿತಕ್ಕೆ ಒಳಗಾಯಿತು. ವೀರಕ್ಯತರಾಯನಿಗೆ ವೀರನಾಗಪ್ಪ ಎಂಬ ಮಗನಿದ್ದ ಈತನು ಕೂಡ ತಂದೆಯ ಹಾಗೆ ವೀರ, ಸತ್ಯವಂತ ಹಾಗು ಪರಮೇಶ್ವರನ ಭಕ್ತ. ವೀರನಾಗಪ್ಪ ಹೊಸಕೆರೆ ಬೋಮ್ಮಲಿನ್ಗಪ್ಪನ ಮಗಳು ವೀರನಾಗಮ್ಮ ಎಂಬುವರನ್ನು ವಿವಾಹವಾದ. ವೀರನಾಗಮ್ಮ ಪಾರ್ವತಿಯ ವರಪ್ರಸಾದ.

ಕೆಲವು ದಿನಗಳ ನಂತರ ಪೆನಗೊಂಡರಾಯ, ನೆಲಮಂಗಲದ ಕುಂಚಗಾರಬೈಚನನ್ನು ಸೋಲಿಸಲು ವೀರಕ್ಯಾತರಾಯನನ್ನು ನೇಮಿಸುತ್ತನೆ. ಪೆನಗೊಂಡರಾಯ ಸಿಂಹಾಸನದಿಂದ ಕೆಳಗಿಳಿದು ಬಂದು ವೀರಕ್ಯಾತರಾಯನ ಕೈ ಹಿಡಿದು ಹೀಗೆ ಹೇಳುತ್ತಾನೆ "ಕುಂಚಗಾರಬೈಚ ತನ್ನ ವಿರೋದಿಗಳನ್ನುಸೊಲಿಸಿ ಅವರ ನಾಲಿಗೆಯನ್ನು ಕತ್ತರಿಸಿ ಅದನ್ನು ತನ್ನ ಚಪ್ಪಲಿಯನ್ನಗಿಸಿಕೊಂಡಿದ್ದಾನೆ, ನೀನು ಅವನನ್ನು ಧ್ವಂಸಗೊಳಿಸಿ, ಅವನ ದುಷ್ಕೃತ್ಯಗಳಿಗೆ ಅಂತ್ಯ ಕಾಣಿಸಬೇಕು, ಈ ಕಾರ್ಯ ನಿನ್ನೋಬನಿಂದ ಮಾತ್ರ ಸಾಧ್ಯ".

ವೀರಕ್ಯಾತರಾಯ ಈ ಮನವಿಯನ್ನು ಸ್ವೀಕರಿಸಿ ನೆಲಮಂಗಲದ ಕಡೆ ಪಯಣಿಸಿದ. ವೀರಕ್ಯಾತರಾಯ ಮತ್ತವನ ಸೈನ್ಯ ತಮ್ಮ ಮುಂದಿನ ನಡೆಯನ್ನು ಯೋಜಿಸತೊಡಗಿದರು. ಇದನ್ನು ಗಮನಿಸಿದ ನೆಲಮಂಗಲದ ಅರಮನೆಯ ಸೈನಿಕರು, ತಮ್ಮ ರಾಜನಿಗೆ ಯಾರೋ ದೊಡ್ಡ ವ್ಯಾಪಾರಿ ಬಂದಿರುವುದಾಗಿ ತಿಳಿಸಿದರು.

ಸ್ವಯಂ ಕುಂಚುಗಾರಬೈಚನೆ ವೀರಕ್ಯತರಾಯನ ಬಳಿ ಬಂದು ತಾವು ಯಾರೆಂದು ಕೇಳಿದ? ತಾವು ಇಲ್ಲಿಗೆ ಆಗಮಿಸಿದ ಕಾರಣ ಏನೆಂದು ಕೇಳಿದ? ವೀರಕ್ಯಾತರಾಯನನ್ನು ಗಮನಿಸಿದ ಕುಂಚುಗಾರಬೈಚ ಈತ ಸಾಮಾನ್ಯ ಮನುಷ್ಯನಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ, ಈತ ಯಾರು ವೀರನು ಶೂರನು ಆಗಿರಬಹುದು ಅಂದುಕೊಂಡ. ಕುಂಚಗಾರಬೈಚ ತಾನು ಹಲವು ರಾಜರನ್ನು ಸೋಲಿಸಿ ಅವರ ನಾಲಿಗೆಯನ್ನು ತನ್ನ ಪಾದರಕ್ಷೆಯನ್ನಗಿ ಮಾಡಿಕೋದ ಕತೆಗಳನ್ನು ವಿವರಿಸತೊಡಗಿದ. ಇದನ್ನು ಕೇಳಿ ವೀರಕ್ಯಾತರಾಯ ತನ್ನನ್ನು ಹೋಗಳಬಹುದು ಅಂದುಕೊಂಡ.

ವೀರಕ್ಯಾತರಾಯ ಕುನ್ಚಗಾರಬೈಚನಿಗೆ ಹೀಗೆ ಹೇಳಿದ "ನಿನ್ನೆಲ್ಲ ಬಿರುದುಗಳನ್ನು ಕೆಳಗಿಳಿಸಿ, ತಾಮ್ರದ ಪಾತ್ರೆಗಳನ್ನು ತೈಯರಿಸಿಕೊದು, ಇಲ್ಲವಾದಲ್ಲಿ ನಿನ್ನ ತಲೆಯನ್ನು ಕತ್ತರಿಸಿ ಎಸೆಯುತ್ತೇನೆ"

ಕುಂಚಗಾರಬೈಚ ವೀರಕ್ಯಾತರಾಯನ ಕಾಲಿಗೆ ಬಿದ್ದು ತನ್ನೆಲ್ಲ ಬಿರುದುಗಳನ್ನೂ ಒಪ್ಪಿಸುತ್ತನೆ. ಆದರು ವೀರಕ್ಯಾತರಾಯ ಮನಸಿನಲ್ಲಿಯೇ ಹೀಗಾದರೂ ಮಾಡಿ ಕುಂಚಗಾರಬೈಚನನ್ನು ಕೊಲ್ಲಬೀಕೆಂದು ನಿರ್ಧರಿಸುತ್ತಾನೆ. ವೀರಕ್ಯಾತರಾಯನು ಪರಮೇಶ್ವರನ ಪೂಜೆಗೆ ಮೂರುದಿನಗ್ದಲ್ಲಿ ಪಂಚಮುಖ ಉಳ್ಳ ತಾಮ್ರದ ಗಂಟೆಯನ್ನು ತೈಯರಿಸಿ ಕೊಡುವಂತೆ ಕುನ್ಚಗಾರಬೈಚನಿಗೆ ಅಪ್ಪಣೆ ಕೊಡುತ್ತಾನೆ.

ಕುಂಚಗಾರಬೈಚ ಗಂಟೆ ತೈಯರಿಸುವ ಕಾರ್ಯ್ವನ್ನರಂಭಿಸಿದ. ವೀರಕ್ಯಾತರಾಯ ಪ್ರತಿನಿತ್ಯ ಕೆಲಸದ ಪ್ರಗತಿಯನ್ನು ವಿಕ್ಷಿಸಲೆಂದು ಬಂದು, ತನ್ನ ಪವಾಡದಿಂದ ತಾಮ್ರದ ಗಂಟೆಗಳು ಕರಗುವಂತೆ ಮಾದುತಿದ್ದ. ಇದರಿಂದಾಗಿ ಕುಂಚಗಾರಬೈಚ ಹೇಳಿದ ಸಮಯದಲ್ಲಿ ಕೆಲಸ ಮುಗಿಸಲು ಸಧ್ಯವಗಲಿಲ್ಲ. ಅಪ್ಪಣೆ ಕೊಟ್ಟ ಕೆಲಸ ಮುಗಿಸದ ಕಾರಣ ವೀರಕ್ಯಾತರಾಯ ಕುಂಚಗಾರಬೈಚನ ತಲೆಯನ್ನು ಕತ್ತರಿಸಿದ. ವೀರಕ್ಯಾತರಾಯ ಕತ್ತಿ ಹಿಡಿದು ಬಾಗಿಲ ತೆರೆದು ಹೊರಟುಹೋದ. ಕುಂಚಗಾರಬೈಚನನ್ನು ಸೋಲಿಸಿ ವೀರಕ್ಯಾತರಾಯನು ಪೆನಗೊಂಡದ ದೊರೆಯಾದ. ತನ್ನ ಎಲ್ಲ ಕಾರ್ಯಗಳನ್ನು ಸಮಾಪ್ತಿಗೊಳಿಸಿ ವೀರಕ್ಯಾತರಾಯ ಕೈಲಾಸವನ್ನು ಸೇರಿಕೊಂಡ.

ತದನಂತರ ವೀರನಾಗಪ್ಪ ತನ್ನ ತಂದೆ ವೀರಕ್ಯಾತರಾಯನ ಒಳ್ಳೆಯ ಕಾರ್ಯವನ್ನು ಮುಂದುವರೆಸಿದ. ವೈರಿ ಸತ್ತರು ವೈರತ್ವ ಸಾಯದು ಎಂಬುವಂತೆ, ಸಮಯಕ್ಕಾಗಿ ಕಾಯುತಿದ್ದ ತುಂಬಾಡಿಯ ಜಟ್ಟಿಗಳು, ಒಮ್ಬಂಟಿಯಾಗಿದ್ದ ವೀರನಾಗಪ್ಪನನ್ನು ಕೊಂದರು, ಕಡೆಗೆ ವೀರನಗಪ್ಪನ ಕೈಯಲ್ಲಿ ಅವರು ಸತ್ತರು. ದಾಹದಿಂದ ಪದುಮವ್ವ ಹಾಗು ವೀರನಾಗಮ್ಮ ನೀರಿಗಾಗಿ ತಮ್ಮ ಹೊಲದಲ್ಲಿ ಭೂಮಿ ಅಗೆದಾಗ ನೀರಿನ ಬದಲು ರಕ್ತ ಕಂಡಿತು. ಇದು ಯಾವುದೋ ಕೆಡುಕಿನ ಸೂಚನೆ ಅಂದುಕೊಂಡರು. ಮನೆಗೆ ಹಿಂತಿರುಗಿದ ವೀರನಾಗಮ್ಮ ಸತ್ತ ತನ್ನ ಗಂಡನನ್ನು ಕಂಡಳು. ಆದರ್ಶ ಸ್ತ್ರೀ ಆಗಿದ್ದ ವೀರನಾಗಮ್ಮ ಪತಿಯೊಂದಿಗೆ ತಾನು ಅಗ್ನಿಪ್ರವೇಶ ಮಾಡಿದಳು. ಹೀಗಾಗಿ ವೀರನಾಗಮ್ಮ ವೀರ ಹೆಂಡತಿ ಅನ್ನಿಸಿ ಕೊಂಡಳು. ಪ್ರಜೆಗಳು ವೀರನಾಗಮ್ಮನನ್ನು ಹೊಗಳಿ ಅವಳ ಹೆಸರಲ್ಲಿ ದೇವಾಲಯವನ್ನು ನಿರ್ಮಿಸಿದರು. ವೀರನಾಗಮ್ಮ ಕೂಡ ತನ್ನ ಭಕ್ತರನ್ನು ರಕ್ಷಿಸತೊಡಗಿದಳು.

ಈಗಲೂ ಉಗಾದಿಯ ದಿನದಂದು ವೀರನಾಗಮ್ಮನ ಹೆಸರಲ್ಲಿ ದೊಡ್ಡ ಜಾತ್ರ ಮಹೋತ್ಸವ ನಡೆಯುತ್ತದೆ. ಭಕ್ತರು ದೇಶವಿದೇಶಗಳಿಂದ ವೀರನಾಗಮ್ಮನ ಆಶೀರ್ವಾದ ಪಡೆಯಲು ಬರುತ್ತರೆ. ತಮ್ಮ ವೈರತ್ವವನ್ನು ಸಾಧಿಸಿದ ಕಾರಣ ಈಗಲೂ ವೀರನಾಗಮ್ಮನ ಭಕ್ತರು ತುಂಬಾಡಿ ಹಾಗು ಸುತ್ತಮುತ್ತಲಿನಲ್ಲಿ ಒಂದು ಹನಿ ನೀರು ಕೂಡ ಕುಡಿಯುವುದಿಲ್ಲ. ಕೆಲವು ಹೇಳಿಕೆಗಳ ಪ್ರಕಾರ ತುಂಬಾಡಿ ಹಾಗು ಸುತ್ತಮುತ್ತಲಿನಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಹಾಳುಕೂದ ಉಣಿಸುವುದಿಲ್ಲ.


 
ಮನೆ     |     ಇತಿಹಾಸ     |     ಸಮಿತಿ     |     ಸುತ್ತ ಮುತ್ತ     |     ದೇವಾಲಯಕ್ಕೆ ದಾರಿ     |     ಪ್ರಕಟಣೆಗಳು     |     ಚಿತ್ರ ಮಂಟಪ     |     ಸಂಪರ್ಕಿಸಿ
© ೨೦೧೪ ಶ್ರೀ ಅಮ್ಮಾಜಿ ವೀರನಾಗಮ್ಮ. ಎಲ್ಲ ಹಕುಗಳನ್ನು ಕಾಯ್ದಿರಿಸಲಾಗಿದೆ.