ಸುತ್ತ ಮುತ್ತ

ವಡ್ದಗೆರೆಗೆ ಬರುವ ಯಾತ್ರಿಗಳಿಗೆ ಸುತ್ತಮುತ್ತಲು ಹಲವರು ಪ್ರೇಕ್ಷಣೀಯ ಸ್ಥಳಗಳಿವೆ. 

ಶಿವಗಂಗೆ, ದೇವರಾಯನದುರ್ಗ, ಗೊರವನಹಳ್ಳಿ ಮುಂತಾದವುಗಳು ಸಮೀಪದಲ್ಲಿ ಇರುವ ಪ್ರೇಕ್ಷಣೀಯ ಸ್ಥಳಗಳು.. 

ಶಿವಗಂಗೆ ಚರಣ ಪ್ರಿಯರಿಗೆ ಹೇಳಿಮಾಡಿಸಿದ ಬೆಟ್ಟ. ಈ ಬೆಟ್ಟವು ಒಂದು ಕೋನ ದಿಂದ ನೋಡಿದರೆ ಲಿಂಗಾಕರದ ರೀತಿಯಲ್ಲಿ ಕಾಣುವುದು. ಈ ಬೆಟ್ಟದಲ್ಲಿ ನಿಮಗೆ ಹಲವರು ಪ್ರಕೃತಿದತ್ತ ನೀರಿನ ಕಾರಂಜಿಗಳು ಕಾಣಸಿಗುತ್ತವೆ. ಭಕ್ತಾದಿಗಳ ನಂಬಿಕೆಯ ಪ್ರಕಾರ ಈ ನೀರು ಹಿಂದೂಗಳ ಪವಿತ್ರನದಿ "ಗಂಗೆ". ಈ ಕಾರಣಕ್ಕಾಗಿಯೇ ಬೆಟ್ಟವನ್ನು ಶಿವಗಂಗೆ ಎಂದು ನಮಕರಿಸಿದ್ದರೆ. ಇದು ಬೆಂಗಳೂರಿನಿಂದ ೬೦ ಕಿ.ಮೀ ದೂರದಲ್ಲಿರುವ ದಾಬಸ್ಪೆಟೆಯಲ್ಲಿದೆ. ಇದನ್ನು "ದಕ್ಷಿಣ ಕಾಶಿ" ಎಂದು ಸಹ ಕರೆಯುತ್ತಾರೆ. ಈ ಬೆಟ್ಟದಲ್ಲಿ ಹಲವರು ದೇವಾಲಯಗಳು ಕಾಣಸಿಗುತ್ತವೆ, ಗಂಗಾಧರೇಶ್ವರ ದೇವಾಲಯ, ಒಳಕಲ್ಲು ತೀರ್ಥ, ನಂದಿ, ಪಾತಾಳಗಂಗೆ ಮುಂತಾದವು. 

ದೇವರಾಯನದುರ್ಗ ತುಮಕೂರು ಜಿಲ್ಲೆಯಲ್ಲಿರುವ ಒಂದು ಬೆಟ್ಟ. ಈ ಬೆಟ್ಟದ ಸುತ್ತಮುತ್ತಲು ಅರಣ್ಯ ಆವರಿಸಿದ್ದು ಹಲವರು ದೇವಾಲಯಗಳು ಕಾಣಸಿಗುತ್ತವೆ. ಯೋಗಾನರಸಿಂಹ ಮತ್ತು ಭೋಗನರಸಿಂಹ ದೇವಾಲಯಗಳಿದ್ದು ಇವು ಸಮುದ್ರ ಮಟ್ಟದಿಂದ ೩೯೪೦ ಅಡಿ ಎತ್ತರದಲ್ಲಿದೆ. ಪ್ರಸಿದ್ದ ನಾಮದ ಚಿಲುಮೆ ಈ ಜಗದ ಆಕರ್ಷಣೆಗಳಲ್ಲೊಂದು. ಈ ಚಿಲುಮೆಯು ಜಯಮಂಗಲಿ ನದಿಯ ಉಗಮಸ್ಥನವೆಂಬ ಪ್ರತೀತಿ ಇದೆ.

ಗೊರವನಹಳ್ಳಿ ದೇವಾಲಯವು ತಾಯಿ ಮಹಾಲಕ್ಷ್ಮಿಗೆ ಮುಡಿಪಾಗಿದೆ. ಮಹಾಲಕ್ಷ್ಮಿಯ ವಿಗ್ರಹವು ಉಧ್ಭವ ಮೂರ್ತಿ ಎಂಬ ನಂಬಿಕೆ. ಈ ದೇವಾಲಯವು ಹಲವರು ಯಾತ್ರಿಗಳನ್ನು ಆಕರ್ಶಿಸಿದೆ. ಶುಕ್ರವಾರದಂದು ವಿಶೇಷ ಪೂಜೆ ನಡೆಯುತ್ತದೆ. ಪ್ರತಿನಿತ್ಯ ಬರುವ ಯಾತ್ರಿಗಳಿಗೆ ಉಚಿತ ಅನ್ನದಾಸೋಹ ಕೊಡಲಾಗುವುದು.


 
ಮನೆ     |     ಇತಿಹಾಸ     |     ಸಮಿತಿ     |     ಸುತ್ತ ಮುತ್ತ     |     ದೇವಾಲಯಕ್ಕೆ ದಾರಿ     |     ಪ್ರಕಟಣೆಗಳು     |     ಚಿತ್ರ ಮಂಟಪ     |     ಸಂಪರ್ಕಿಸಿ
© ೨೦೧೪ ಶ್ರೀ ಅಮ್ಮಾಜಿ ವೀರನಾಗಮ್ಮ. ಎಲ್ಲ ಹಕುಗಳನ್ನು ಕಾಯ್ದಿರಿಸಲಾಗಿದೆ.